ಕೌಲೀ, ಹನ್ನಾ 
1743-1809. ನಾಟಕಕಾರ್ತಿ ಮತ್ತು ಕವಯಿತ್ರಿ. ಹುಟ್ಟಿದ್ದು ಡೆವನ್‍ಭಾಗದ ಟೈವರ್‍ಟನ್‍ನಲ್ಲಿ, ಪುಸ್ತಕ ವ್ಯಾಪಾರಿ ಫಿಲಿಪ್ ಪಾರ್ಕ್ ಹಾಸನ ಮಗಳು. 1768ರಲ್ಲಿ ಕ್ಯಾಪ್ಟನ್ ಕೌಲೀಯನ್ನು ಮದುವೆಯಾದಳು. ಈಕೆಯ ರನ್‍ಅವೇ (1776) ಎಂಬ ನಾಟಕ ಕೇವಲ 15 ದಿನಗಳಲ್ಲಿ ಬರೆದುದಾದರೂ ಈಕೆಗೆ ತುಂಬ ಯಶಸ್ಸನ್ನು ತಂದಿತು. 
ಹೂಸ್ ದಿ ಡ್ಯೂಪ್ (1779), ದಿ ಬೆಲ್ಲೇಸ್ ಸ್ಟ್ರ್ಯಾಟಜಮ್ (1782), ಎ ಬೋಲ್ಡ್ ಸ್ಟ್ರೋಕ್ ಫಾರ್ ಎ ಹಸ್ಬೆಂಡ್(1783), ಎ ಸ್ಕೂಲ್ ಫಾರ್ ಗ್ರೇಬಿಯಡ್ರ್ಸ್ (1786)-ಇವು ಈಕೆ ಅನಂತರ ಬರೆದ ನಾಟಕಗಳು. ದಿ ಮೆಯ್ಡ್ ಆಫ್ ಅರಾಗನ್ (1780), ದಿ ಸ್ಕಾಟಿಷ್ ವಿಲೇಜ್ (1787), ಎಡ್ವಿನ್ (1784), ದಿ ಸೀಜ್ ಆಫ್ ಆಕ್ರ್ (1799)- ಇವು ಈಕೆ ಬರೆದ ಕೆಲವು ಕವನಗಳು. ಈಕೆಯ ಕೃತಿಗಳು 1813ರಲ್ಲಿ ಪ್ರಕಟವಾದುವು. 					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ